ಭಾರತದ ನೆರವಿಗೆ ಧಾವಿಸಿದ ಫ್ರಾನ್ಸ್, ರಾಫೆಲ್ ಯುದ್ಧ ವಿಮಾನ ಜೊತೆಗೆ ಬರುತ್ತಿದೆ ಮೆಡಿಕಲ್ ಕಿಟ್!

ನವದೆಹಲಿ(ಜು.28); ಕೊರೋನಾ ವೈರಸ್ ನಿಯಂತ್ರಣಕ್ಕೆ ಇದೀಗ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರಯಲಾಗುತ್ತಿದೆ. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಲವು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಭಾರತದ ಕಾರ್ಯಕ್ಕೆ ವಿದೇಶಗಳು ಕೈಜೋಡಿಸಿದೆ. ಕೆಲ ದೇಶಗಳು ಭಾರತಕ್ಕೆ ಮೆಡಿಕಲ್ ಸಲಕರಣೆಯನ್ನು ಉಚಿತವಾಗಿ ನೀಡುತ್ತಿದೆ. ಸೋಂಕಿತರ ಚಿಕಿತ್ಸೆಗೆ ಈಗಾಗಲೇ ಇಸ್ರೇಲ್ ವೆಂಟಿಲೇಟರ್ ನೀಡಿತ್ತು. ಇದರ ಬೆನ್ನಲ್ಲೇ ಫ್ರಾನ್ಸ್ ಕೂಡ ಭಾರತಕ್ಕೆ ವೆಂಟಿಲೇಟರ್ ನೀಡಿದೆ. ಫ್ರಾನ್ಸ್ ಒಟ್ಟು 120 ವೆಂಟಿಲೇಟರ್‌ನ್ನು ಭಾರತಕ್ಕೆ ನೀಡಿದೆ. 50 ಒಸಿರಿಸ್ 3 ವೆಂಟಿಲೇಟರ್ ಹಾಗೂ 70 ಯುವೆಲ್ 830 ವೆಂಟಿಲೇಟರ್‌ನ್ನು ಫ್ರಾನ್ಸ್ ನೀಡಿದೆ. ವಿಶೇಷ ಅಂದರೆ ಇದು ಫ್ರಾನ್ಸ್ ಉಚಿತವಾಗಿ ಭಾರತಕ್ಕೆ ವೆಂಟಿಲೇಟರ್ ನೀಡಿದೆ. ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿದ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮಾಕ್ರೋನ್ , ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಫ್ರಾನ್ಸ್ ಸಹಕಾರ ನೀಡುವುದಾಗಿ ಹೇಳಿದ್ದರು. ಇಷ್ಟೇ ಅಲ್ಲ ವೆಂಟಿಲೇಟರ್ ನೀಡುವುದಾಗಿ ಘೋಷಿಸಿದ್ದರು. ಇದೀಗ ಒಂದೇ ವಾರದಲ್ಲಿ ಫ್ರಾನ್ಸ್ ವೆಂಟಿಲೇಟರ್ ಭಾರತಕ್ಕೆ ಕಳುಹಿಸಿಕೊಟ್ಟಿದೆ. ಫ್ರಾನ್ಸ್ ದೇಶದಲ್ಲಿ ಕೊರೋನಾ ಮಿತಿ ಮೀರಿದಾಗ ಭಾರತ ಔಷಧಿಗಳನ್ನೂ ಪೂರೈಸಿತ್ತು. ಸಂಕಷ್ಟದ ಸಮಯದಲ್ಲಿ ಭಾರತ ನಮ್ಮ ಜೊತೆ ನಿಂತಿತ್ತು ಎಂದ ಇಮ್ಯಾನ್ಯುಯೆಲ್ ಹೇಳಿದ್ದಾರೆ....